Sign In

Shri Kanakachala Narasimha Temple, Kanakagiri

Shri Kanakachala Lakshmi Narasimha Temple 1
Shri Kanakachala Lakshmi Narasimha Temple 2
Shri Kanakachala Lakshmi Narasimha Temple 3
Shri Kanakachala Lakshmi Narasimha Temple 4
Shri Kanakachala Lakshmi Narasimha Temple 5
Shri Kanakachala Lakshmi Narasimha Temple 6
Shri Kanakachala Lakshmi Narasimha Temple 7

Temples

Listing Added
January 12, 2017
Location
Gangavathi
Phone No
08533240011
Website
-
Views

Loading

Year Of Established
-
Kanakagiri

Shri Kanakachala Narasimha Temple, Kanakagiri 08533240011

ಕನಕಗಿರಿಯುತ್ತ ಪಯಣ

 

ಕಣ್ಣಿದ್ದವರು ಕನಕಗಿರಿ, ಕಾಲಿದ್ದವರು ಹಂಪೆ ನೋಡಬೇಕು ಎನ್ನುವ ನೂರಾರು ವರ್ಷದ ಜನವಾಣಿ ಎಷ್ತೊಂದು ಸೂಕ್ತವೂ ಆಗಿದೆ, ಹಾಗೆ ಈ ಭಗದಲ್ಲಿ ಪ್ರಸಿದ್ದವಾಗಿದೆ. ಭಾರತದ ಇತಿಹಾಸದಲ್ಲಿ ವಿಜಯನಗರ ಸಾಮ್ರಜ್ಯ ತುಂಬ ಚಿರಸ್ಮರಣೆಯ ಸಾಮ್ರಾಜ್ಯ ಈ ಸಾಮ್ರಜ್ಯದ ವಶಿಷ್ಟ ಯೂಗವೆಂದರೆ  ಸುವರ್ಣಯುಗದ ಈ ಯುಗದಲ್ಲಿ ವುಜಯನಗರದ ಮಾಂಡಲೀಕರ ರಾಜದಾನಿಯಾಗಿ ಮೆರದ ಐತಿಹಾಸಿಕ ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೆತ್ರವೇ  ಅಂದಿನ   ಸುವರ್ಣಗಿರಿಯೇ ಇಂದಿನ ಕನಕಗಿರಿ,

 

ಕನಕಗಿರಿ ಪುರಾಣ ಪ್ರಸಿದ್ದ ಕ್ಷೆತ್ರವೆನ್ನುವುದಕ್ಕೆ ಸ್ಕಾಂದ ಪುರಾಣದಲ್ಲಿ ಬರುವ ಶ್ರಿ ಕನಕಾಚಲ ಲಕ್ಷಿಮಿ ನರಸಂಹ ದೇವರ ವರ್ಣನೆಯೇ ಸಾಕ್ಷಿ. ಹಾಗೂ ‘ಧ್ಯಾಯೇತ್ ಸ್ವರ್ಣಗಿರಿಶ್ವರಂ’  ‘ಪುಷ್ಪಾನದೀ ತೀರವಾಸೀ’ ಹೀಗೇ ಅನೇಕ ಸ್ತೊತ್ರಗಳಲ್ಲಿ ಶ್ರಿ ಕನಕಾಚಲ ದೇವರನ್ನು ಭಕ್ತಿ-ಭಾವದಿಂದ ಹೇಳಿರುವ, ಹಾಡಿರುವ ಉದಹಾರಣೆಗಳಿವೆ. ಹಾಗೆ ತುಂಗಾ ತೀರದ ವಿರುಪಾಕ್ಷ ಕ್ಷೆತ್ರ (ಹಂಪೆ) ದಿಂದ ಉತ್ತರ ದಿಕ್ಕಿನ ಆರು ಹರದರಿಯ ಅಂತರದಲ್ಲಿ ಎರಡು ಸಣ್ಣ ನದಿಗಳ (ಪುಷ್ಟಾ-ಜಯಂತಿ) ಸಂಗಮ ತೀರದಲ್ಲಿ ಕನಕಗಿರಿ ಇದೆ ಎಂಬುದು ಪುರಾಣ ಸತ್ಯ ಜೊತೆಗೆ ಅಶೋಕ ಸಾಮ್ರಾಜ್ಯ ದಕ್ಷಿಣದ ಪ್ರಾದೆಶಿಕ ಕಾರ್ಯ ಕೇಂದ್ರವಾಗಿ ಪುರಾಣ ಸತ್ಯ ಜೋತೆಗೆ ಅಶೋಕ ಸಮ್ರಾಜ್ಯ ದಕ್ಷಿಣದ ಪ್ರಾದೆಶಿಕ ಕಾರ್ಯ ಕೇಂದ್ರವಾಗಿ ಅಂದಿನ ‘ಸುವರ್ಣಗಿರಿ’  ಯೆಂಬ ಊಹೆಗೆ ಸಮರ್ಥಕವಾಗುವಂತೆ ವಿಜಯನಗರದ ಮಾಂಡಲೀಕರ ರಾಜಧಾನಿ ಕನಕಗಿರಿಯ ಇಪ್ಪತೈದು ಮೈಲು (೪೨ ಕಿ.ಮೀ) ದೂರವಿರುವ ಕೋಪ್ಪಳ ಮತ್ತು ಮಸ್ಕಿ (ರಾಯಚೂರು ಜಿಲ್ಲೆ ಲಿಂಗಸೂಗುರು ತಾಲುಕು) ಎಂಬಲ್ಲಿ ಅಶೋಕನ ಶಾಸನಗಳು ದೊರೆತಿವೆ.

 

 ಈ ಕಾರಣಗಳಿಂದ ಇದು ‘ಸುವರ್ಣಗಿರಿ’ ಎನ್ನುವದಾದರೆ ಈ ಊರಿಗೆ ಕನಕಮುನಿಯ ಲೋಕ ಕಲ್ಯಾಣಕ್ಕಾಗಿ ಆಗಮಿಸಿದ್ದ, ಆತ ಆಚರಿಸಿದ ತಪಸ್ಸಿನಿಂದ ಇಲ್ಲಿ  ಕ್ಷಣಕಾಲ ಕನಕವೃಷ್ಟಿಗರೆದಿದ್ದಾನೆ,  ಆ ಕಾರಣಕ್ಕಾಗಿ ಈ ಊರಿನ ಕನಕಗಿರಿ ಎಂದು ನಾಮಕರಣವಾಗಿದೆಂಬ ಕಥೆ ಲಬ್ಯವಾಗುತ್ತದೆ. ಯಾವಾಗ ಕನಕಮೂನಿ ತನ್ನ ತಪಸ್ಸಿನಿಂದ ಕನಕವೃಷ್ಠಿಗರೆದನೋ ಆ ಕ್ಷಣದಿಂದ ಇಲ್ಲಿ ದೇವರಿಗಾಗಿ ‘ಕನಕರಾಯ’ ಎಂದು ಕರೆಯಲ್ಪಟ್ಟಿತು  ಎಂದು  ಶ್ರಿ ವಿಜಯದಾಸರ ಹಾಡಿನಿಂದ  ತಿಳಿಯಬರುತ್ತದೆ

 

                       ಅನುಮಾನವಿದಕಲ್ಲ   ಪೂವ್ರದ ಕತೆಕೇಳಿ

                      ಕನಕಮುನೀಶ್ವರ ತಪಮ  ಮಾಡಿದನಂದು ಕನಕ

                      ವರುಷ ಒಂದು ಕ್ಷಣ ಕರೆವುದು ನಿತ್ಯ ಇನಿತು ಮಹಿಮೆಯುಂಟು

                      ಇದರಿಂದ ಲಕುಮೀಶ ಕನಕರಾಯನೆಂದು  ಕರೆಸಿಕೊಂಡನಿಲ್ಲಿ

 

                       ದೇವರ ಇತಿಹಾಸ

 

ಪುಷ್ಪ – ಜಯಂತಿ ನದಿಗಳ ಶ್ರಿಶೈಲ (ಆಂದ್ರಪ್ರದೇಶ) ಮಾಗ್ರದಿಂದ ಗೋಲ್ಲರು ತಮ್ಮ ದನ ಕರು ಕುರಿಗಳನ್ನು ಹೊಡೆದುಕೊಂಡು ಈ ಕ್ಷೆತ್ರದ ದಡಕೆ ಬಂದು ಸೇರುತ್ತಾರೆ. ಗೊಲ್ಲರುದನ ಕರುಗಳಗುಂಪಿನಿಂದ ಒಂದು ಗೋವು  ಪ್ರತಿ ನಿತ್ಯ ಕೆಲ ಕಾಲ ಕಣ್ಮರೆಯಾಗುತ್ತಿತ್ತಂತೆ. ಇದನ್ನು ಗಮನಿಸಿ ದನಗಾಯಿ ಗೊಲ್ಲ ತನ್ನ ಹಟ್ಟಿಯಿಂದ ಈ ಗೋವು ನಿತ್ಯ ಎಲ್ಲಿ ಹೋಗಿ ಬರುತ್ತದೆಂದು ಪತ್ತೆ ಮಾಡುವುದಕ್ಕೆ ಒಂದು ದಿನವನ್ನು ನಿಗದಿಪಡಿಸಿಕೊಳ್ಲುತ್ತಾನೆ.

 

ಆದೇ ರೀತಿಯಾಗಿ ಆ ದಿನವು ಕೊಡ ಆ ಗೋವು ನಾಪತ್ತೆಯಾಗಿದೆ. ಅದರ ಹೆಜ್ಜೆ ಜಾಡು ಹಿಡಿದು ಗೋಲ್ಲ ಕೂಡ ಬಂದು ನೋಡುತ್ತಾನೆಂತೆ ಆಗ ಆತನ ಗೋವು ನದಿ ದಂಡೆಯ ಗಿಡಗಂಟೆ ಮದ್ಯೆ ಇದ್ದ ಹುತ್ತಕ್ಕೆ ಹಾಲುಗರೆಯುತ್ತಿತ್ತು. ಇದನ್ನು ಕಣ್ನಾರೆ ಕಂಡ  ಗೋಲ್ಲನಿಗೆ ಆಶ್ಚರ್ಯ ಉಂಟಾಗಿದೆ ಜೊತೆಗೆ ಭಯವು ಮನದಲ್ಲಿ ಮನೆಮಾಡಿದೆ.

 

ಯಾರೋ ಮಂತ್ರವಾದಿ ಈ ಹೂತ್ದಲ್ಲಿ ಕುಳಿತುಕೋಂಡು ನನ್ನ ಗೋವಿಗೆ ಮಾಟ ಮಾಡಿಸಿದ್ದಾನೆ. ಅದಕ್ಕಾಗಿ ನನ್ನ ಗೋವು ಅವನಿಗೆ ಹಾಲುಗರೆದು ಬರುತ್ತದೆ ಎಂಬ ಅನುಮಾನ ಆ ಗೊಲ್ಲನನ್ನು ಕಾಡಿದೆ. ಅದಕ್ಕೆ ಕೆಂಡ ಮಂಡಲವಾದ ಗೊಲ್ಲ ಮರುದಿನವೇ ಒಂದು ಕಬ್ಬಿಣದ ಹಾರೆ ಹಿಡಿದುಕೊಂಡು ಮತ್ತೆ ಗೋವಿನ ಬೆನ್ನು ಬಿದ್ದಿದ್ದಾನೆ.  ಆದಿನವು ಗೋವು ಹುತ್ತಿಗೆ ಹಾಲುಗರೆದು ತನ್ನಪಾಡಿಗೆ ತಾನು ಹೊರಟುಹೋಗಿದೆ. ಕೂಡಲೆ ರೋಷದಿಂದ ಬಂದ ಗೊಲ್ಲ ತನ್ನ ಕೈಯಲ್ಲಿ ಹರೆಯಿಂದ ಹುತ್ತದ ಒಳಗೆ ಹೋಡಿದ್ದಾನೆ . ಆಗ ದೋಡ್ಡದಾದ ಸದ್ದು ಢಣ್ ಎಂದು ಕೇಳಿಸಿದೆ. ಜೋತೆಗೆ ಇಡೀ ಭೊಮಿಯೇ ಕಂಪನವಾದಂತೆ ಭಾಸವಾಗಿದೆ.

 

ಕ್ಷಣ ಗಾಬರಿಗೊಂಡ ಗೊಲ್ಲ ಇದೇನಿದು ಹುತ್ತದ ಒಳಗಿನಿಂದ ವಿಚಿತ್ರವಾದ ಸದ್ದು ಇಲ್ಲಿ ಏನೋ ಇದೆ ಎಂದು ಸಂಪೋರ್ಣ ಹುತ್ತವನ್ನು ಹಗೆದು ನೋಡಿದ್ದಾನೆ ಆ ಸ್ಥಳದಲ್ಲಿ ಅಂದರೆ ಹುತ್ತದಲ್ಲಿ ಲಿಂಗಾಕಾರದ ಸಾಲಿಗ್ರಾಮ ಗೋಚರವಾಗಿದೆ. ಪೂಣ್ಯಕ್ಷೆತ್ರ ಕನಕಗಿರಿ

ಕೂಡಲೆ ದನಗಾಯಿ ಗೊಲ್ಲ ತನಗಾದ ಅನುಭವ, ಮತ್ತು ತಾನು ಕಂಡು ಸಾಲಿಗ್ರಾಮದ ಮಾಹಿತಿಯನ್ನು ಗುಜ್ಜಲವಂಶದ ಪರಸಪ್ಪ ನಾಯಕನೆಂಬ ಬೇಡರ ಗುಂಪಿನ ನಾಯಕನಿಗೆ

ಸಂಪೊರ್ಣ ವಿವರಣೆ  ನೀಡುತ್ತಾನಂತೆ, ಆಗ ಸಾಲಿಗ್ರಾಮ ಸ್ಥಳಕ್ಕೆ ಧಾವಿಸಲು ಪರಸಪ್ಪ ನಾಯಕ ಭೊಮಿಯಿಂದ  ಉದ್ಬವವಾದ ಲಿಂಗಕಾರದ ಕಂಡು ಇದು ಈ ನೆಲದ ಒಡೆಯ, ಇದು ಬೂಮಿಯಿಂದ ಹುಟ್ಟಿದಕ್ಕೆ ಇದು ಭೊದೇವ ಎಂದು ಕರೆದನೆಂದು  ಜನರಹೇಳಿಕೆಯ ಕಥೆಗಳ ಮೊಲಕ ಕೇಳಿ ಬರುತ್ತದೆ,

 

ನಂತರ ಪರಸಪ್ಪ ನಾಯಕ ಬೂದೇವರ ಕುರಿತು ಅಂದಿನ ವಿಜಯನಗರ  ನರಮತಿ ಪ್ರತಾಪ  ಪ್ರೌಢ ದೇವರಾಯನಿಗೆ ವಿಸ್ತಾರವಾದ ಮಾಹಿತಿ ನೀಡುತ್ತಾನೆ ಆಗ ಪ್ರೌಢದೇವರಾಯ ಪರಸಪ್ಪ ನಾಯಕನಿಗೆ ೧೫ನೇ ಶತಮಾನದ ಮದ್ಯದಲ್ಲಿ     ೧೨ ಗ್ರಾಮಗಳನ್ನು ಉಂಬಳಿಯಾಗಿ ನೀಡುತ್ತಾನೆ.

 

ಇದಾದ ಮೇಲೆ ಈ ಸ್ಥಳಕ್ಕೆ ಕನಕಗಿರಿ ಎಂದು ಕರೆಯುತ್ತಿದ್ದರಿಂದ ಭೂದೇವ ಬದಲಾಗಿ ದೇವರಿಗೆ ಕನಕರಾಯ ಎಂದು ಕರೆಯುವುದು ೧೫ನೇ ಶತಮಾನದ ಮದ್ಯೆ ಕಾಲದಿಂದ ವಾಡಿಕೆಯಾಗುತ್ತದೆ, ಆಗ ಪರಸಪ್ಪ ನಾಯಕ ೧೨ ಗ್ರಾಮಗಳ ಉಂಬಳಿಯಿಂದ  ಬರುತಿದ್ದ ಕಂದಾಯದ ಕೋಂಚ ಹಣದಿಂದ ಕನಕರಾಯನ ಗರ್ಬಾಲಯವನ್ನು ಕಟ್ಟಿಸುತ್ತಾನೆ.

 

ಹೀಗೇ ಮುಂದೆ ಪರಸಪ್ಪ ನಾಯಕ ಪ್ರತಿಷ್ಠೆ ಪರಾಕ್ರಮದ ಬಲ ಬೆಳೆದಂತೆ ವಿಜಯನಗರದ ಅರಸರಾದ, ಸಾಳುವ ನರಸಿಂಹ,  ಕೃಷ್ಣದೇವರಾಯ,  ಅಚ್ಯುತರಾಯ ಅವರೆಲ್ಲ ಕನಕರಾಯ ದೇವರು ದೇವಸ್ತಾನಕ್ಕಾಗಿ ೪೦ ಲಕ್ಷ ವರಹ ಉತ್ಪನ್ನುಳ್ಳ ಪ್ರಾಂತವನ್ನು ಪರಸಪ್ಪ ನಾಯಕ ಕೈಗೆ ಒಪ್ಪಿಸುತ್ತಾರೆ,  ಇದರಿಂದ ಸಾಮಾನ್ಯ ನಾಯಕ ನಾಗಿದ್ದು  ಬೇಡರ ಹಿರಿಯ ವೈಕ್ತಿ ಪರಸಪ್ಪ ನಾಯಕ  ಶ್ರಿ ಮನ್ಮ ಹಾನಕಾಚಾರ್ಯ ನಾಯಕ ಶರೋಮಣಿ ಗುಜ್ಜಲ ವಂಶೋದ್ಭವನಾಗಿ ಪ್ರಖ್ಯಾತಿ ಹೋಂದುತ್ತಾನೆ.

 

ಇದೆಲ್ಲ ಆ ದೇವರಾದ ಕನಕರಾಯನ ವರಪ್ರಸಾದದಿಂದಲೇ ಎನ್ನುವ ನುಡಿ ಪರಸಪ್ಪ ನಾಯಕನಿಂದ ಪ್ರಚಾರವಾದ ಮೇಲೆ ಕಾಲಕ್ರಮೇಣ ಕನಕರಾಯ. ನರಸಿಂಹ ದೇವರೆಂದು ಪ್ರಸಿದ್ದಿ ಪಡೆಯುತ್ತದೆ. ಜೊತೆಗೆ ನರಸಿಂಹ ದೇವರ ಗುಡಿಯ (ಉತ್ತರ ದಿಕ್ಕಿಗೆ) ಎಡಬಾಗದಲ್ಲಿ ಕುಲ ದೇವತೆಯಾದ  ಲಕ್ಷಿಮಿ  ದೇವಿಯ ಗರ್ಭಗುಡಿಯು ನಿರ್ಮಾಣ ವಾಗುತ್ತದೆ,  ಹೀಗಾಗಿ ಇಲ್ಲಿ ಶ್ರಿ ಕನಕಾಚಲ ಲಕ್ಷಿಮಿ ನರಸಿಂಹ ದೇವಸ್ತಾನವೆಂದು ಕರೆಯುವುದು ಬಹುದಿನದ ವಾಡಿಕೆ ಬೇಳೆದು ಬೆಳೆದುಬಂದಿದೆ

Loading

Address Kanakagiri
Email Id
Phone 08533240011
Website -

Got Any Questions, Please Feel Free To Ask




    Warning: Undefined array key "title" in /home4/seegluym/public_html/wp-content/plugins/listeo-core/includes/class-listeo-core-widgets.php on line 1279
    Now Closed
    • Monday 04:30 AM - 08:00 PM
      04:30 AM - 08:00 PM
      04:30 AM - 08:00 PM
      04:30 AM - 08:00 PM
    • Tuesday 04:30 AM - 08:00 PM
      04:30 AM - 08:00 PM
      04:30 AM - 08:00 PM
      04:30 AM - 08:00 PM
    • Wednesday 04:30 AM - 08:00 PM
      04:30 AM - 08:00 PM
      04:30 AM - 08:00 PM
      04:30 AM - 08:00 PM
    • Thursday 04:30 AM - 08:00 PM
      04:30 AM - 08:00 PM
      04:30 AM - 08:00 PM
      04:30 AM - 08:00 PM
    • Friday 04:30 AM - 08:00 PM
      04:30 AM - 08:00 PM
      04:30 AM - 08:00 PM
      04:30 AM - 08:00 PM
    • Saturday 04:30 AM - 08:00 PM
      04:30 AM - 08:00 PM
      04:30 AM - 08:00 PM
      04:30 AM - 08:00 PM
    • Sunday 04:30 AM - 08:00 PM
      04:30 AM - 08:00 PM
      04:30 AM - 08:00 PM
      04:30 AM - 08:00 PM
    Verified Listing

    Tags

    Temples
    Ad1 Ad1